¡Sorpréndeme!

'ಮಹದಾಯಿ ಹೋರಾಟದ ಬಂದ್' ಬಗ್ಗೆ ಪುನೀತ್ ಕೊಟ್ಟ ಹೇಳಿಕೆ | Filmibeat Kannada

2018-01-24 1,104 Dailymotion

ಮಹದಾಯಿ ನೀರಿನ ಹೋರಾಟಕ್ಕಾಗಿ ನಾಳೆ ಕರ್ನಾಟಕ ಬಂದ್ ಮಾಡುವ ಬಗ್ಗೆ ನಟ ಪುನೀತ್ ರಾಜ್ ಕುಮಾರ್ ಮಾತನಾಡಿದ್ದಾರೆ. ಪುನೀತ್ ರಾಜ್ ಕುಮಾರ್ ನಿರ್ಮಾಣದ ಎರಡನೇ ಸಿನಿಮಾದ ಮುಹೂರ್ತ ಇಂದು ಕಂಠಿರವ ಸ್ಟೂಡಿಯೋದಲ್ಲಿ ನಡೆದಿದ್ದು ಈ ವೇಳೆ ಪುನೀತ್ ಮಹದಾಯಿ ಹೋರಾಟದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

''ನಾವು ಕನ್ನಡಿಗರೆ, ಈ ಹೋರಾಟಕ್ಕೆ ನಮ್ಮ ಬೆಂಬಲ ಯಾವಾಗಲೂ ಇರುತ್ತದೆ. ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ಸಿಗುವಂತಾಗಲಿ''. ಎಂದು ಪುನೀತ್ ರಾಜ್ ಕುಮಾರ್ ಹೇಳಿದ್ದಾರೆ. ಈ ಹಿಂದೆಯೇ ಆದ ಮಹದಾಯಿ ಮತ್ತು ಕಾವೇರಿ ವಿಚಾರದ ಹೋರಾಟಗಳಲ್ಲಿ ಪುನೀತ್ ರಾಜ್ ಕುಮಾರ್ ಭಾಗಿಯಾಗಿದ್ದರು.

ಪುನೀತ್ ನಿರ್ಮಾಣದ ಎರಡನೇ ಚಿತ್ರ 'ಮಯಾ ಬಜಾರ್' ಸಿನಿಮಾದ ಮುಹೂರ್ತ ಇಂದು ನೆರವೇರಿದೆ. 'ಕವಲು ದಾರಿ' ಸಿನಿಮಾದ ನಂತರ ಅಪ್ಪು ಬಂಡವಾಳ ಹಾಕುತ್ತಿರುವ ಸಿನಿಮಾ ಇದಾಗಿದೆ.

Puneeth Rajkumar gave reaction about mahadayi river protest today in Kanteerava Studio. He has been always supporting for these kind of protests